ಅಭಿನವ ಗುರುಕುಲಗಳಲ್ಲಿ ಇರಬೇಕಾದ ಸಂಪನ್ಮೂಲಗಳು

ಅಭಿನವ ಗುರುಕುಲಗಳಲ್ಲಿ ಇರಬೇಕಾದ ಸಂಪನ್ಮೂಲಗಳು

ಗುರುಕುಲ ಎಂದರೆ, ಅದೊಂದು ದೊಡ್ಡ ಕಂಪೌಂಡ್‌ ಗೋಡೆ, ಸಾಲುಗಟ್ಟಿದ ಕ್ಲಾಸ್‌ ರೂಮುಗಳು, ಕಾರ್ಯಾಲಯ ಇತ್ಯಾದಿಗಳನ್ನು ಒಳಗೊಂಡಿರುತ್ತದೆ, ಶಾಲೆ ಅಥವಾ ಕಾಲೇಜಿನಂತೆಯೇ ಒಂದು ಸಂಸ್ಥೆಯಾಗಿರುತ್ತದೆ ಹಾಗೂ ಅದು ಸರ್ಕಾರೀ ಮಾನ್ಯತೆ ಇತ್ಯಾದಿಗಳನ್ನು ಪಡೆದಿರಬೇಕು ಎಂಬಿತ್ಯಾದಿ ಪೂರ್ವಾಗ್ರಹಗಳು ವರ್ತಮಾನ ಸಮಾಜದಲ್ಲಿ ಇವೆ. ಕಳೆದ ಇನ್ನೂರು ವರ್ಷಗಳಿಂದ ವಿದ್ಯೆ ಎಂದರೆ ಶಾಲೆ-ಕಾಲೇಜು ಇತ್ಯಾದಿ ಸರ್ಕಾರೀ ಹಿಡಿತಕ್ಕೊಳಪಟ್ಟ ಸಂಸ್ಥೆಗಳಲ್ಲಿ ಮಾತ್ರವೇ ದೊರೆಯುತ್ತದೆ ಹಾಗೂ ಪ್ರಮಾಣಪತ್ರವೇ ಅದರ ಅಂತಿಮ ಗುರಿಯಾಗಿರುತ್ತದೆ ಎಂಬಂತಹ ವ್ಯವಸ್ಥೆಯಲ್ಲಿ ನಾವೆಲ್ಲ ಬೆಳೆದು ಬಂದಿರುವುದರಿಂದ, ಅಂತಹ ಪೂರ್ವಾಗ್ರಹ ಇರುವುದು ಸಹಜ.

ಇನ್ನು, ಪ್ರಾಚೀನ ವಿದ್ಯಾವ್ಯವಸ್ಥೆ ಎಂದಕೂಡಲೇ, ನಲಂದಾ, ತಕ್ಷಶಿಲಾ, ವಿಕ್ರಮಶಿಲಾ ಇತ್ಯಾದಿ ಕೆಲ ಬೃಹತ್‌ ಗುರುಕುಲಗಳ ಹೆಸರುಗಳು ನಮ್ಮ ಮನೊಭಿತ್ತಿಯಲ್ಲಿ ಮೂಡುತ್ತವೆ. ಏಕೆಂದರೆ ಅಂತಹ ಕೆಲವೇ ಕೆಲವು ಗುರುಕುಲಗಳ ಮಾಹಿತಿ ಜನಪ್ರಿಯ ಮಾಧ್ಯಮಗಳಲ್ಲಿ ಲಭ್ಯವಿದೆ. ಸದರಿಪ್ರಾಚೀನ ಗುರುಕುಲಗಳುಯೂರೋಪಿನ ವಿಶ್ವವಿದ್ಯಾಲಯಗಳ ಸ್ವರೂಪದ ಜೊತೆಗೆಹೋಲಿಕೆಗೆ ಯೋಗ್ಯವಾಗಿವೆಎಂಬ ಕಾರಣಕ್ಕೆ, ಈ ಹೋಲಿಕೆಯಕ್ರಮದಲ್ಲಿ ಅವುಗಳಹೆಸರುಗಳು ಎಲ್ಲೆಡೆಕೇಳಿಬರುತ್ತವೆ.

ಆದರೆ, ವಿದೇಶೀ ದಾಳಿಗಳ ಪೂರ್ವದಅಖಂಡ ಭಾರತದಲ್ಲಿಇಂತಹ ಕೆಲವೇಕೆಲವು ಗುರುಕುಲಗಳಮೂಲಕ ರಾಷ್ಟ್ರದಎಲ್ಲ ಪ್ರಜೆಗಳಿಗೆಶಿಕ್ಷಣ ನೀಡುವುದುಅಸಾಧ್ಯ ಎನ್ನುವುದನ್ನುಗಮನಿಸಬೇಕು. ಹಾಗೆಗಮನಿಸಿದಾಗ,ಈ ಕೆಲಪ್ರಸಿದ್ಧ ಹಾಗೂಬೃಹತ್‌ ಗುರುಕುಲಗಳಹೊರತಾದ ಅಥವಾಅವುಗಳಿಗೆ ಪೂರಕವಾದಶೈಕ್ಷಣಿಕ ಚಟುವಟಿಕೆಯುಗ್ರಾಮ, ಪಟ್ಟಣ, ನಗರ ಇತ್ಯಾದಿಗಳಲ್ಲಿ ನಡೆಯುತ್ತಿರಲಿಕ್ಕೇಬೇಕು ಎಂಬಲೆಕ್ಕಾಚಾರವು ಹುಟ್ಟುತ್ತದೆ.

ಧರ್ಮಪಾಲ್‌ ರವರ Beautiful tree ಎಂಬ ಪುಸ್ತಕದಲ್ಲಿಒದಗಿಸಿದ ದಾಖಲೆಗಳಲ್ಲಿಆರು ಲಕ್ಷಕ್ಕೂಅಧಿಕ ಪಾಠಶಾಲೆಗಳುಇದ್ದವು ಎಂಬಿತ್ಯಾದಿಮಾಹಿತಿ ಸಿಗುತ್ತದೆ. ಆದರೆ, ಈಪಾಠಶಾಲೆಗಳ ಗಣತಿಮಾಡಿದ್ದು ಬ್ರಿಟಿಷ್‌ ಅಧಿಕಾರಿಗಳಾದ್ದರಿಂದ,ಸಾಂಸ್ಥಿಕ ಸ್ವರೂಪಇರುವ ಅಥವಾಸಾಮೂಹಿಕ ಪಾಠಶಾಲೆಗಳನ್ನು ಮಾತ್ರವೇ ಅವರುಲೆಕ್ಕಕ್ಕೆ ತೆಗೆದುಕೊಂಡಿರುತ್ತಾರೆ. ಈಪಾಠಶಾಲೆಗಳ ಹೊರತಾಗಿಯೂಮನೆ, ವಂಶಅಥವಾ “ಕುಲ”ಎಂಬ ಸಂಸ್ಥೆಯಲ್ಲಿಒಂದು ತಲೆಮಾರಿನಿಂದಇನ್ನೊಂದು ಮಾರಿಗೆವರ್ಗಾವಣೆಯಾಗುತ್ತಿದ್ದ ವಿದ್ಯೆ, ಉದ್ಯಮ, ಕೃಷಿ, ಕಲೆ, ವಾಣಿಜ್ಯಇತ್ಯಾದಿಗಳ ಶಿಕ್ಷಣವನ್ನುಬ್ರಿಟಿಷ್‌ ಅಧಿಕಾರಿಗಳಗಣತಿಯಲ್ಲಿ ದಾಖಲಿಸಿಲ್ಲ.

ಹಾಗಾಗಿ, ಐತಿಹಾಸಿಕ ದಾಖಲೆಗಳಲ್ಲಿಕಂಡುಬರುತ್ತಿರುವ ಸ್ವರೂಪಕ್ಕಿಂತಬೃಹತ್ತಾದ ಮತ್ತುಭಿನ್ನವಾದ ಶೈಕ್ಷಣಿಕಚಟುವಟಿಕೆ ಅಖಂಡ ಭಾರತದಲ್ಲಿ ಇತ್ತು ಎನ್ನುವುದುಸ್ಪಷ್ಟವಾಗುತ್ತದೆ. ಇಲ್ಲಿ“ಶಿಕ್ಷಣ ವ್ಯವಸ್ಥೆ” ಎಂಬ ಪದಬಳಕೆಯನ್ನುಮಾಡದೇ,ಉದ್ದೇಶಪೂರ್ವಕವಾಗಿ “ಚಟುವಟಿಕೆ” ಎಂಬಶಬ್ದವನ್ನು ಬಳಸಲಾಗಿದೆ. ಏಕೆಂದರೆ, ಶಿಕ್ಷಣವನ್ನುವ್ಯವಸ್ಥಾಗತವಾಗಿ ಆಡಳಿತವೇನೀಡಬೇಕು ಹಾಗೂನಿಯಂತ್ರಿಸಬೇಕು ಎಂಬಪರಿಕಲ್ಪನೆಯು ಬ್ರಿಟಿಷ್‌ ಪೂರ್ವ ಭಾರತದಲ್ಲಿಇರಲಿಲ್ಲ. Education system ಅನ್ನುವ ಹೆಸರನ್ನು ಅನುವಾದಿಸಿ ನಾವು “ವ್ಯವಸ್ಥೆ” ಎನ್ನುತ್ತಿದ್ದೇವೆಯೇ ಹೊರತು, ಅದಕ್ಕಿಂತ ಪೂರ್ವದಲ್ಲಿ ಶಿಕ್ಷಣದ ಸಂದರ್ಭದಲ್ಲಿ “ವ್ಯವಸ್ಥೆ” ಎಂಬ ಪದಬಳಕೆ ಭಾರತೀಯ ಭಾಷೆಗಳಲ್ಲಿ ಕಂಡುಬರುವುದಿಲ್ಲ.

ವಿದ್ವಾಂಸರುಗಳಿಗೆ ರಾಜಾಶ್ರಯವಿರುತ್ತಿದ್ದುದು ನಿಜವೇ ಆದರೂ, ವಿದ್ಯೆಯನ್ನು ಪ್ರಜೆಗಳಿಗೆ ಪೂರೈಸುವುದು ರಾಜಕೀಯ ಸಂಸ್ಥಾನಗಳ ಜವಾಬ್ದಾರಿಯಾಗಿರಲಿಲ್ಲ. ಈ ವಿದ್ಯಾಪೂರೈಕೆಯು ಕುಟುಂಬ ಅಥವಾ “ಕುಲ” ಎಂಬ ಸಂಸ್ಥೆಯ ಭಾಗವೇ ಆಗಿದ್ದರಿಂದ, ಶಿಕ್ಷಣವು ಗುರುಕುಲದ ಮೂಲಕ ದೊರೆಯುತ್ತದೆ ಎಂಬುದು ಜನಜನಿತ ಮಾತು.

ಗುರುವಿನ ಕುಲವೇ “ಗುರುಕುಲ”

ಸಂಸ್ಕೃತದ ಶಬ್ದಕೋಶಗಳಲ್ಲಿ “ಗುರು” ಎಂಬ ಶಬ್ದಕ್ಕೆ “ತಂದೆ” ಅಂತಲೇ ಅರ್ಥವಿದೆ. ಅದು ಮೂಲಾರ್ಥವಾಗಿದ್ದು, ತಂದೆಯ ಕರ್ತವ್ಯವನ್ನು ನಿರ್ವಹಿಸುವ, ಅಂದರೆ ತಂದೆಯಂತೆಯೇ ವಿದ್ಯೆ ಕಲಿಸುವ, ಪೋಷಿಸುವ ಇತರರನ್ನೂ ಕೂಡ ರೂಢಿಯಲ್ಲಿ ಗುರು ಎಂದು ಕರೆಯಲಾಗುತ್ತದೆ.

ಪಂಚಮಾತಾ ಮತ್ತುಪಂಚಪಿತಾ ಎಂಬವಿಂಗಡಣೆಯಲ್ಲಿ ಐದುಜನರನ್ನು ತಂದೆಮತ್ತು ಐದುಜನರನ್ನು ತಾಯಿಯಸ್ಥಾನದಲ್ಲಿ ಗುರುತಿಸಲಾಗುತ್ತದೆ.

ಪದ್ಮಪುರಾಣದಲ್ಲಿನ“ಗುರುವರ್ಗ”ದಲ್ಲಿ12 ಕ್ಕೂ ಹೆಚ್ಚುಕೌಟುಂಬಿಕ ಸಂಬಂಧಿಗಳಿಗೆ “ಗುರು” ಎಂಬಸಂಜ್ಞೆ ಕಾಣಿಸುತ್ತದೆ. ಈರೀತಿಯಾಗಿ ಮೂಲಾರ್ಥಮತ್ತು ರೂಢಾರ್ಥಎರಡೂ ಪ್ರಕಾರಗಳಲ್ಲಿನೋಡಿದಾಗ, ಕುಂಟುಂಬವೇ“ಗುರುಕುಲ” ಎಂಬುದುಸಿದ್ಧವಾಗುತ್ತದೆ. ಹಾಗಾಗಿವಂಶಾನುಗತವಾಗಿ ಕುಟುಂಬದಮೂಲಕ ದೊರೆಯುವಶಿಕ್ಷಣವೇ ಗುರುಕುಲಶಿಕ್ಷಣ ಎಂಬುದಾಗಿಯೂ, “ಪಿತೃ-ಕುಲವೇಗುರು-ಕುಲ” ಎಂಬುದಾಗಿಯೂ ಸ್ಪಷ್ಟವಾಗುತ್ತದೆ.

ಸದರಿ “ಕುಲ”ದಲ್ಲಿಅಥವಾ ಕುಟುಂಬದಲ್ಲಿದೊರೆತ ಶಿಕ್ಷಣಕ್ಕೆಪೂರಕವಾಗಿ ಉನ್ನತಮಟ್ಟದ ಶಿಕ್ಷಣನೀಡಲು ತಕ್ಷಶಿಲಾಇತ್ಯಾದಿ ಸಂಸ್ಥೆಗಳುನಿರ್ಮಾಣಗೊಂಡಿದ್ದರಿಂದ ಅವುಗಳನ್ನೂ ಕೂಡಗುರುಕುಲ ಎಂದುಕರೆದದ್ದು ಸಮಂಜಸವೇಆಗಿದೆ. ಆದರೆ, ಕೇವಲ ಅಂತಹಸಂಸ್ಥೆಗಳನ್ನು ಮಾತ್ರವೇಗುರುಕುಲ ಎನ್ನಲಾಗುವುದಿಲ್ಲ. ಮೂಲಾರ್ಥದಲ್ಲಿ “ಮನೆಯೇಗುರುಕುಲ” ಎಂಬುದನ್ನುನೆನಪಿಟ್ಟುಕೊಳ್ಳಬೇಕು.

ಸಂಪನ್ಮೂಲಗಳು ಯಾವವು?

ಒಂದು ಗುರುಕುಲದಲ್ಲಿಏನೆಲ್ಲ ಸಂಪನ್ಮೂಲಗಳುಇರಬೇಕು? ಎಂಬಪ್ರಶ್ನೆಗೆ ಉತ್ತರಕಂಡುಕೊಳ್ಳುವ ಕ್ರಮದಲ್ಲಿಗುರುಕುಲವೆಂದರೆ ಏನುಎಂಬ ಸ್ಪಷ್ಟತೆಇರಬೇಕಾಗುತ್ತದೆ. ಈಕ್ರಮದಲ್ಲಿ ಮನೆಯೇಗುರುಕುಲ ಅಂತಾದಾಗ, ಮನೆಯ ಸಂಪನ್ಮೂಲಗಳೇಗುರುಕುಲದ ಸಂಪನ್ಮೂಲಗಳುಎಂಬಂತೆ ಅನ್ವಯವಾಗುತ್ತದೆ. ಗ್ರಾಮೀಣಮನೆಗಳಲ್ಲಿ ಹಿತ್ತಲು, ಅಂಗಳು, ಪಡಸಾಲೆ, ಗೋಶಾಲೆ(ದನದಹಟ್ಟಿ), ಇತ್ಯಾದಿಅಂಗಾಂಗಗಳು ಮಾತ್ರವಲ್ಲದೇಆ ಮನೆಯವರಕುಲ-ಕಸುಬಿಗೆಸಂಬಂಧಿಸಿದ ಕಾರ್ಯಕಲಾಪಗಳೂನಡೆಯುವ ವಿಸ್ತಾರವಾದಮನೆ ಇರುತ್ತಿದ್ದರಿಂದ, ಆ ಮನೆಯೇಕಲಿಕಾಕೇಂದ್ರ ಅಥವಾಪ್ರಯೋಗಶಾಲೆಯಾಗಿ ಕಾರ್ಯನಿರ್ವಹಿಸುತ್ತಿತ್ತು. ಹಾಗಾಗಿಒಂದು ಭಾರತೀಯಮನೆಯಲ್ಲಿ ಏನೆಲ್ಲಸಂಪನ್ಮೂಲಗಳು ಬೇಕೋ, ಅವುಗಳೇ ಗುರುಕುಲಕ್ಕೆಬೇಕಾಗುವ ಸಂಪನ್ಮೂಲಗಳುಎಂದು ಕ್ಲುಪ್ತವಾಗಿಹೇಳಿಬಿಡಬಹುದು.

ಆದರೆ ಮಹಾನಗರಗಳನಿರ್ಮಾಣ, ಇಕ್ಕಟ್ಟಾದಬಹುಮಹಡಿ ವಸತಿಸಮುಚ್ಚಯ, ವಾಸಸ್ಥಳಮತ್ತು ಕಸುಬಿನಸ್ಥಳಗಳ ಬೇರೆಯಾಗಿರುವಿಕೆ ಇತ್ಯಾದಿ ವರ್ತಮಾನದಸ್ಥಿತಿ-ಗತಿಗಳಲ್ಲಿಮನೆಯನ್ನೇ ಗುರುಕುಲವನ್ನಾಗಿ ಪರಿಗಣಿಸುವುದು ಸಾಧ್ಯವಾಗುವುದಿಲ್ಲ. ಮನೆ, ಪಾಠಶಾಲೆ, ಪ್ರಯೋಗಶಾಲೆ ಇವೆಲ್ಲಬೇರೆ ಬೇರೆಆಗಿ ಹೋಗಿವೆ. ಹಾಗಾಗಿ ಈಗಿನಸ್ಕೂಲುಗಳಲ್ಲಿಯೂ ಕೂಡಕೃತಕ ಪ್ರಯೋಗಶಾಲೆಗಳನಿರ್ಮಾಣ ಅನಿವಾರ್ಯವಾಗಿದೆ.

ಮೆಕಾಲೆ ನಿರ್ಮಿತಶಿಕ್ಷಣವ್ಯವಸ್ಥೆಯಲ್ಲಿ ಎಲ್ಲರಿಗೂಹೈಸ್ಕೂಲ್‌ ಮಟ್ಟದವರೆಗೆ ಏಕರೂಪೀಪಾಠ್ಯಕ್ರಮವಿರುವುದರಿಂದ ಪ್ರಯೋಗಶಾಲೆಯೂಎಲ್ಲೆಡೆ ಒಂದೇರೀತಿಯಲ್ಲಿದ್ದು ಅವುಗಳಲ್ಲಿಸೀಮಿತ ಮತ್ತುಅಣುಕು ಪ್ರಯೋಗಗಳುಮಾತ್ರ ಸಾಧ್ಯವಾಗುತ್ತವೆ.

ನಾವು ಗುರುಕುಲಎಂಬ “ಮುಕ್ತಮತ್ತು ಪ್ರಯೋಗಾಧಾರಿತ ಕಲಿಕಾಪದ್ಧತಿ” ಯನ್ನುಅಳವಡಿಸುವಾಗ ಹಳೆಯದಾದಈ ಏಕರೂಪತೆಯನ್ನುಅಲ್ಲಿಯೂ ಅಳವಡಿಸಿದರೆ, ಗುರುಕುಲಗಳೂ ಕೂಡಸ್ಕೂಲುಗಳ ಅಚ್ಚಿನಲ್ಲಿಹಾಕಿ ತೆಗೆದಂತೆತಯಾರಾಗಿ, ಕೆಲವೇ ವಿದ್ಯೆಮತ್ತು ಒಂದೆರಡುಅಣುಕು ಪ್ರಯೋಗಗಳಿಗೆಸೀಮಿತವಾಗುತ್ತವೆ. ಅಲ್ಲಿಗೆಗುರುಕುಲ ನಿರ್ಮಾಣದಉದ್ದೇಶವೇ ದಾರಿತಪ್ಪುತ್ತದೆ.

ಹಾಗಾಗಿ ಇಂತಹಸಂಪನ್ಮೂಲಗಳೇ ಇರಬೇಕು, ಇಂತಹ ಶಿಕ್ಷಕರೇಇರಬೇಕು ಎಂಬಿತ್ಯಾದಿಮಾನದಂಡಗಳನ್ನು ಎಲ್ಲಗುರುಕುಲಗಳಿಗೆ ಅನ್ವಯವಾಗುವಂತೆ ಸಿದ್ಧಪಡಿಸುವುದು ಹಾಗೂಎಲ್ಲೆಡೇ ಅದನ್ನುಪಾಲಿಸುವುದು ಹಾನಿಕಾರಕವೇಆಗುತ್ತದೆ. ಏಕೆಂದರೆಅಲ್ಲಿ ಕಲಿಸುವವಿದ್ಯೆಗಳು ಮತ್ತುಕಲೆಗಳು ದೇಶ-ಕಾಲ, ನಿಮಿತ್ತ ಇತ್ಯಾದಿಗಳಿಗೆಅನುಗುಣವಾಗಿ ಒಂದೊಂದುಗುರುಕುಲದ ಸ್ವರೂಪಒಂದೊಂದು ರೀತಿಯಲ್ಲಿಇರುವುದು ಸಹಜವಾಗಿರುತ್ತದೆ. ಈ ವೈವಿಧ್ಯತೆಗೆಅನುಗುಣವಾಗಿ ಸಂಪನ್ಮೂಲಗಳಲ್ಲಿಯೂ ವಿವಿಧತೆ ಅನಿವಾರ್ಯವಾಗಿರುತ್ತದೆ.

ಏನುಅನಿವಾರ್ಯ?

“ಗುರುಕುಲದಲ್ಲಿಏನು ಅನಿವಾರ್ಯ?” ಎಂಬ ಪ್ರಶ್ನೆಗೆ“ಗುರುಕುಲದಲ್ಲಿ ಗುರುವುಮಾತ್ರ ಅನಿವಾರ್ಯ, ಮತ್ಯಾವುದೂ ಅನಿವಾರ್ಯವಲ್ಲ” ಎಂಬ ಏಕವಾಕ್ಯದಉತ್ತರ ನೀಡಬಹುದಾಗಿದೆ.

ಹಾಗಿದ್ದಾಗಿಯೂಕೂಡ, ಶಾಲೆಗೆಪರ್ಯಾಯವಾಗಿ ಶಾಲೆಯನ್ನುಹೋಲುವ ಗುರುಕುಲಗಳೇಈಗಿನ ಆದ್ಯತೆ ಹಾಗೂ ಅಗತ್ಯಆಗಿರುವುದರಿಂದ, ಅವುಗಳನ್ನು “ಅಭಿನವ ಗುರುಕುಲ” ಎಂಬ ಹೆಸರಿನಿಂದಗುರುತಿಸಿ, ಸದರಿಅಭಿನವ ಅಥವಾಆಧುನಿಕ ಗುರುಕುಲದಲ್ಲಿಅಗತ್ಯವಾಗುವ ಸಂಪನ್ಮೂಲಗಳನ್ನು ಪಟ್ಟಿ ಮಾಡಬಹುದಾಗಿದೆ.

ಸದರಿ ಪಟ್ಟಿಯನ್ನು, ವಸ್ತು, ವಿಷಯ ಮತ್ತುವಿಚಾರ ಎಂಬಮೂರು ಗಣಗಳಲ್ಲಿಗ್ರಹಿಸಲಾಗುತ್ತದೆ.

1. ವಸ್ತು

ಅಭಿನವ ಗುರುಕುಲಗಳಲ್ಲಿ ಐದು ಪ್ರಮುಖವಿಭಾಗಗಳನ್ನು ಅಗತ್ಯವಾಗಿಹೊಂದಿರಬೇಕು.

1. ಪಾಠಶಾಲೆ

2. ಪಾಕಶಾಲೆ

3. ಪ್ರಯೋಗಶಾಲೆ

4. ಗೋಶಾಲೆ

5. ಅತಿಥಿಶಾಲೆ

ಐದು ಶಾಲೆಗಳ ಸಮೂಹ ಅಥವಾ ಪಂಚಶಾಲಾ ಎಂದು ಕರೆಯಲ್ಪಡುವ ಈ ಸಮುಚ್ಚಯವು ಅಭಿನವ ಗುರುಕುಲದ ಆಧಾರವಾಗಿದೆ. ಇವುಗಳು ಬೇರೆಬೇರೆಯಾಗಿ ಇರಬಹುದುಅಥವಾ ಒಂದರಲ್ಲೇಮತ್ತೊಂದರ ಸಮಾವೇಶವೂಇರಬಹುದು. ಉದಾಹರಣೆಗೆಪಾಠಶಾಲೆ ಅನ್ನುವವಿಭಾಗದಲ್ಲಿ ಪಾಠಕ್ಕಾಗಿಕೋಣೆಗಳನ್ನು ನಿರ್ಮಿಸಬಹುದುಅಥವಾ ಆಚಾರ್ಯರಮನೆಯ ಪಡಸಾಲೆಯನ್ನೇಪಾಠಶಾಲೆಯಾಗಿ ಉಪಯೋಗಿಸಬಹುದು. ಈ ಪಂಚಶಾಲಾಸಮುಚ್ಚಯವನ್ನು ಪ್ರಶಸ್ತವಾಗಿ ಅನುಷ್ಠಾನಕ್ಕೆತರಲು ಕನಿಷ್ಠಎರಡು ಎಕರೆಯಷ್ಟಾದರೂಭೂಮಿಯ ಅಗತ್ಯವಿರುತ್ತದೆ. ಗೋಶಾಲೆ ಹಾಗೂಅದಕ್ಕೆ ಪೂರಕವಾದಕೃಷಿ ಇತ್ಯಾದಿಚಟುವಟಿಕೆಗಳನ್ನು ಪೂರ್ತಿಯಾಗಿಪ್ರಯೋಗಕ್ಕೆ ತರಲಿಕ್ಕೆಐದು ಎಕರೆಗಿಂತಅಧಿಕ ಭೂಮಿಬೇಕಾಗಬಹುದು. ಪ್ರಯೋಗಶಾಲೆಯಸ್ವರೂಪವೂ ಕೂಡಗುರುಕುಲದ ಸ್ವರೂಪಕ್ಕನುಗಣವಾಗಿ ಇರುತ್ತದೆ. ಉದಾಹರಣೆಗೆಷಡಂಗ ಸಹಿತವೇದಾಧ್ಯಯನದ ಗುರುಕುಲದಲ್ಲಿಯಾಗಶಾಲೆಯೇ ಪ್ರಯೋಗಶಾಲೆಯಾಗುತ್ತದೆ. ಅದಕ್ಕೆಅಗತ್ಯವಾದ ಸಮಿತ್ತು, ದರ್ಭೆ, ಇತ್ಯಾದಿಗಳನ್ನು ಸಂಗ್ರಹಿಸಲು ವನಪ್ರದೇಶ, ಪೂಜಾದಿಗಳಿಗೆ ಬೇಕಾದಪುಷ್ಪವಾಟಿಕೆ, ಗೋವಂಶದನಿರ್ವಣೆಗೆ ಬೇಕಾದಸ್ಥಳ ಇತ್ಯಾದಿಗಳುಆ ಯಾಗಶಾಲೆಎಂಬ ಪ್ರಯೋಗಶಾಲೆಗೆಪೂರಕವಾದ ಪ್ರಾಯೋಗಿಕಅಗತ್ಯಗಳು. ಸಮಿತ್ತನ್ನುಹೇಗೆ ಕತ್ತರಿಸಿಸಂಗ್ರಹಿಸಬೇಕು, ಗೋವಿನಹಾಲನ್ನು ಹೇಗೆಕರೆಯಬೇಕು ಇತ್ಯಾದಿಪ್ರಯೋಗಗಳು ವೈದಿಕಶಿಕ್ಷಣದ ಅಂಗವಾದ್ದರಿಂದಗೋಶಾಲೆ, ಹೊಲ-ಗದ್ದೆಇತ್ಯಾದಿಗಳೂ ಪ್ರಯೋಗಶಾಲೆಯವ್ಯಾಪ್ತಿಗೆ ಬರುತ್ತವೆ.

ಇದೇ ರೀತಿಧನುರ್ವೇದದ ಅಂಗವಾದಕಳರಿ ಇತ್ಯಾದಿವಿದ್ಯೆಗಳನ್ನು ಕೇಂದ್ರದಲ್ಲಿಟ್ಟುಕೊಂಡು ಗುರುಕುಲವನ್ನುಮಾಡುವುದಾದರೆ, ಆಯುಧತಯಾರಿಗೆ ಲೋಹಕಾಯಿಸುವ ಕುಲುಮೆಯಿಂದಮೊದಲುಗೊಂಡು ಗರಡಿಮನೆ/ಕುಸ್ತಿಯಆಖಾಡದಂತಹ ಬೇರೆರೀತಿಯ ಪ್ರಯೋಗಶಾಲೆಗಳಅಗತ್ಯ ಉಂಟಾಗುತ್ತದೆ.

ಆಯುರ್ವೇದ ಗ್ರಂಥಗಳನ್ನುಪಾಠ ಮಾಡುವುದಾದರೆ, ವನಸ್ಪತಿ ಸಂಗ್ರಹದಜಾಗ, ಔಷಧನಿರ್ಮಾಣಶಾಲೆ, ಚಿಕಿತ್ಸಾಲಯಇತ್ಯಾದಿಗಳು ಪ್ರಯೋಗಶಾಲೆಯವ್ಯಾಪ್ತಿಗೆ ಬರುತ್ತವೆ.

ಗ್ರಂಥಾಲಯ, ಕಂಪ್ಯೂಟರ್‌ ಲ್ಯಾಬ್‌ ಇತ್ಯಾದಿಗಳು ಪಾಠಶಾಲೆಯವ್ಯಾಪ್ತಿಗೆ ಬರುತ್ತವೆ. ಈ ಕ್ರಮದಲ್ಲಿಪ್ರಯೋಗಶಾಲೆ ಮತ್ತುಪಾಠಶಾಲೆಯ ಸ್ವರೂಪಗಳುಬೇರೆ ಬೇರೆರೀತಿಯ ಗುರುಕುಲಗಳಲ್ಲಿ ಭಿನ್ನವಾಗಿರುತ್ತವೆ.

ಭೂಮಿ, ಭವನಇತ್ಯಾದಿಗಳ ಜೊತೆಗೆಗುರುಕುಲದ ಪೊಷಣೆಗೆಆರ್ಥಿಕ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕಾಗುತ್ತದೆ. ಒಂದುದಶಕದ ನಂತರಹಳೆಯ ವಿದ್ಯಾರ್ಥಿಗಳಗುರುದಕ್ಷಿಣೆ ಇತ್ಯಾದಿಗಳಮೂಲಕ ಅರ್ಥವುಬರುತ್ತದೆ. ಆದರೆಪ್ರಾರಂಭಿಕ ಹತ್ತುವರ್ಷಗಳ ನಿರ್ವಹಣೆಗೆಬೇಕಾಗುವ ಮೊತ್ತವನ್ನುಸಂಗ್ರಹಿಸಿಟ್ಟುಕೊಳ್ಳಬೇಕು. ಗುರುವುಅಲ್ಲಿ ವಾಸಮಾಡುವ ಕಾರಣಕ್ಕಾಗಿಯೇಅದನ್ನು ಗುರುಕುಲುಎಂದು ಕರೆಯುವುದರಿಂದ, ಅಧ್ಯಾಪಕರುಗಳಿಗೆ ವಾಸವ್ಯವಸ್ಥೆಯನ್ನು ಮಾಡುವುದಲ್ಲದೇ, ಆಯಾಕಾಲದಲ್ಲಿ ಒಂದುತೊಲೆ (10 ಗ್ರಾಂ) ಬಂಗಾರಕ್ಕೆ ಎಷ್ಟುಬೆಲೆ ಇರುತ್ತದೆಯೋ, ಅಷ್ಟು ಮೊತ್ತವನ್ನುಮಾಸಿಕ ದಕ್ಷಿಣೆಯನ್ನಾಗಿ ನೀಡಬೇಕು. ಇದುಸಂಬಳ ಎನ್ನುವಭಾವನೆ ಕೊಡುವವರಿಗೂಇರಬಾರದು ಹಾಗೂತೆಗೆದುಕೊಳ್ಳುವವರಿಗೂ ಇರಬಾರದು.

2. ವಿಷಯ

ಐದಾರು ವರ್ಷಗಳಪ್ರಾಥಮಿಕ ಶಿಕ್ಷಣದಲ್ಲಿಭಾಷಾಜ್ಞಾನ, ಸಾಹಿತ್ಯ, ಸಂಗೀತ, ಗಣಿತ, ಭೌತಶಾಸ್ತ್ರ, ರಸಾಯನ ಶಾಸ್ತ್ರಇತ್ಯಾದಿಗಳು ಮುಖ್ಯವಿಷಯವಾಗಿದ್ದಾಗಿಯೂ, ಯಾವುದಾದರೂಒಂದು ವಿದ್ಯೆಅಥವಾ ಕಲೆಯನ್ನುಅಧ್ಯಯನದ ಮುಖ್ಯವಿಷಯವಾಗಿ ಇಟ್ಟುಕೊಳ್ಳಬೇಕು. ಇಲ್ಲಿ ಕಲೆಎಂದರೆ ಕೇವಲಸಂಗೀತ, ನೃತ್ಯಇತ್ಯಾದಿ ಲಲಿತಕಲೆಗಳಲ್ಲ. ಕೃಷಿ, ವಾಣಿಜ್ಯ ಇತ್ಯಾದಿಗಳೂಕೂಡ ಕಲಾ-ವಿಭಾಗಕ್ಕೆಸೇರುತ್ತವೆ. ಪ್ರಧಾನವಾಗಿ ಒಂದು ಶಾಸ್ತ್ರ(ವಿದ್ಯೆ) ಹಾಗೂ ಅದಕ್ಕೆಪೂರಕವಾಗಿ ಕನಿಷ್ಠಇನ್ನೆರಡು ಶಾಸ್ತ್ರಗಳನ್ನು ತಿಳಿಯುವುದು ಗುರಿಯಾಗಿರಬೇಕು.

ಶಾಸ್ತ್ರ ಎಂದರೆಕೇವಲ ಧರ್ಮಶಾಸ್ತ್ರವಲ್ಲ. ಭೌತಶಾಸ್ತ್ರ, ಖಗೋಲ, ಗಣಿತ ಶಾಸ್ತ್ರಇತ್ಯಾದಿ ಹೆಸರುಗಳಲ್ಲಿಇರುವಂತೆ “ಶಾಸ್ತ್ರಗಳು” ಎಂಬ ಶಬ್ದಕ್ಕೆSciences ಎಂಬ ಅರ್ಥವಿದೆಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು

ಏಕಂಶಾಸ್ತ್ರಮಧೀಯಾನೋ ನವಿದ್ಯಾತ್‌ ಶಾಸ್ತ್ರ ನಿಶ್ಚಯಂ

ತಸ್ಮಾತ್‌ ಬಹುಶೃತಃಶಾಸ್ತ್ರಂ ವಿಜಾನೀಯಾತ್‌ ಚಿಕಿತ್ಸಕಃ - ಸುಶ್ರುತಸಂಹಿತಾ, 1 -4 -7

(ಕೇವಲಒಂದು ಶಾಸ್ತ್ರದಲ್ಲಿನೈಪುಣ್ಯ ಹೊಂದಿದವನು“ಇದು ಹೀಗೆಯೇ” ಎಂದು ಯಾವುದೇವಿಷಯದಲ್ಲಿ ನಿಶ್ಚಯಮಾಡಬಾರದು. ಹಾಗಾಗಿವೈದ್ಯನಾದವನು (ಚಿಕಿತ್ಸೆಗೆಇಳಿಯುವ ಮುನ್ನ) ಬಹಳಷ್ಟು ಶಾಸ್ತ್ರಗಳನ್ನು ತಿಳಿದಿರಬೇಕು)

ಮೇಲಿನ ಮಾತನ್ನುಸುಶ್ರುತನು ವೈದ್ಯರಬಗ್ಗೆ ಹೇಳಿದ್ದಾದರೂಈ ಮಾತುಎಲ್ಲೆಡೆ ಅನ್ವಯಿಸುತ್ತದೆ. ಹೀಗೆ ಒಂದಕ್ಕಿಂತಹೆಚ್ಚು ಶಾಸ್ತ್ರಗಳನ್ನು ತಿಳಿದವರನ್ನೇ “ಬಹುಶೃತವಿದ್ವಾಂಸರು” ಎಂದುಇಂದಿಗೂ ಕರೆಯಲಾಗುತ್ತದೆ. ಬಹುಶೃತತ್ವ ಇಲ್ಲದೇಕೇವಲ ಒಂದುವಿಷಯವನ್ನು ತಿಳಿದವರುಉನ್ನತ ಶಿಕ್ಷಣ, ಸಂಶೋಧನೆ ಇತ್ಯಾದಿಎಲ್ಲೆಡೆ ಹಿನ್ನಡೆಅನುಭವಿಸುತ್ತಾರೆ. ಹಾಗಾಗಿ ಚಿಕ್ಕವಯಸ್ಸಿನಿಂದಲೇ ಒಂದಕ್ಕಿಂತಹೆಚ್ಚು ಶಾಸ್ತ್ರಗಳನ್ನು ಪಾಠ್ಯಕ್ರಮದಲ್ಲಿ ಸೇರಿಸಿಕೊಳ್ಳಬೇಕು.

ಇದನ್ನೇmultidisciplinary approach ಎಂದು ಆಧುನಿಕಶಿಕ್ಷಣ ತಜ್ಞರುಕರೆಯುತ್ತಿದ್ದಾರೆ ಹಾಗೂಇತ್ತೀಚಿನ National Education Policy ಯಲ್ಲಿಯೂ ಈವಿಧಾನವನ್ನು ಶಾಲೆಗಳಲ್ಲಿಅಳವಡಿಸುವಂತೆ ಶಿಫಾರಸ್ಸುಮಾಡಲಾಗಿದೆ. .

3. ವಿಚಾರ

ಯಾವುದೇ ಕಾರ್ಯಮಾಡುವಾಗಲೂ ವೈಚಾರಿಕ ಅಧಿಷ್ಠಾನ ಅಥವಾ ಜೀವನ ದೃಷ್ಟಿ ಬಹಳಮುಖ್ಯವಾದದ್ದಾಗಿದೆ. ಯಾವ ಉದ್ದೇಶಕ್ಕಾಗಿ ಅಥವಾಯಾವ ಸಂಕಲ್ಪಪೂರ್ತಿಗಾಗಿ ಕಾರ್ಯದ ಅನುಷ್ಠಾನನಡೆಯುತ್ತಿದೆ ಎಂಬುದುಸ್ಪಷ್ಟವಿಲ್ಲದೇ ಹೋದರೆ ಆ ಕಾರ್ಯದಿಶಾಹೀನವಾಗಿರುತ್ತದೆ.

ಜೀವನದೃಷ್ಟಿಹಾಗೂ ಆಜೀವನದೃಷ್ಟಿಯನ್ನು ಏಕೆಹೋಂದಿರಬೇಕು ಎಂಬಸಿದ್ಧಾಂತಗಳು ಸ್ಪಷ್ಟವಾದರೆ, ಅದಕ್ಕೆ ಅನುಗುಣವಾಗಿಅನುಷ್ಠಾನವು ನಡೆಯುತ್ತದೆ. ಇದನ್ನೇ ವೈಚಾರಿಕಅಧಿಷ್ಠಾನ ಎನ್ನಲಾಗಿದೆ.

ಅಧಿಷ್ಠಾನಂ ತಥಾ ಕರ್ತಾ ಕರಣಂ ಚ ಪೃಥಗ್ವಿಧಂ ।
ವಿವಿಧಾಶ್ಚ ಪೃಥಕ್‌ ಚೇಷ್ಟಾ ದೈವಂ ಚೈವಾತ್ರ ಪಂಚಮಂ ॥ ಭ. ಗೀ 18-14 ॥

ಯಾವುದೇ ಪ್ರಕಾರದಕಾರ್ಯ ಸಫಲತೆಯಿಂದಪೂರ್ಣಗೊಳ್ಳಲು ಬೇಕಾದಐದು ಅಂಶಗಳನ್ನುಶ್ರೀಕೃಷ್ಣನು ಮೇಲಿನಈ ಶ್ಲೋಕದಲ್ಲಿಹೇಳಿದ್ದಾನೆ ಹಾಗೂಆ ಐದರಪೈಕಿ “ಅಧಿಷ್ಠಾನ”ವೆಂಬುದುಮೊಟ್ಟಮೊದಲನೇಯದ್ದಾಗಿದೆ.

ಕಾರ್ಯ

“ಉದ್ದೇಶ”, ಉದಾತ್ತವಾದ “ಧ್ಯೇಯ” ಮತ್ತು ಅದರಬಗೆಗಿನ “ಸ್ಪಷ್ಟತೆ”ಎಂಬ ಮೂರುಅಂಶಗಳು ವೈಚಾರಿಕಅಧಿಷ್ಠಾನದ ಅಂಗಗಳಾಗಿವೆ.

1. ಉದ್ದೇಶ: - ಯಾವಉದ್ದೇಶಕ್ಕಾಗಿ ಗುರುಕುಲನಿರ್ಮಿಸುತ್ತಿದ್ದೇವೆ ಅಥವಾಯಾವ ಪ್ರತಿಫಲವನ್ನು ಹೊಂದಲಿಕ್ಕಾಗಿಇದನ್ನು ಮಾಡುತ್ತಿದ್ದೇವೆ ಎಂಬುದು ಸ್ಪಷ್ಟವಿರಬೇಕು. ಉದ್ದೇಶವು ವೈಯಕ್ತಿಕವಾಗಿರಬಹುದು ಅಥವಾ ಸಾಮಾಜಿಕವಾಗಿರಬಹುದು.

2. ಧ್ಯೇಯ: - ಕಾರ್ಯವನ್ನು ಅನುಷ್ಠಾನಗೊಳಿಸುವ ವ್ಯಕ್ತಿ ಅಥವಾ ತಂಡಕ್ಕೆತಮ್ಮ ಪ್ರತಿಫಲ ಅಥವಾಉದ್ದೇಶಸಾಧನೆಯ ಹೊರತಾಗಿದೊಡ್ಡದಾದ, ದೀರ್ಘಕಾಲೀನವಾದ ಹಾಗೂ ಉದಾತ್ತವಾದಧ್ಯೇಯವೊಂದು ಇರಬೇಕು.

3. ಸ್ಪಷ್ಟತೆ:- ನಮಗೆಬೇಕಾಗಿರುವ ಪ್ರತಿಫಲಏನು ಹಾಗೂಆ ಪ್ರತಿಫಲವುಉದಾತ್ತವಾದ ಧ್ಯೇಯಕ್ಕೆಯಾವ ರೀತಿಯಲ್ಲಿಪೂರಕವಾಗಿದೆ, ನಾವುಅನುಸರಿಸುತ್ತಿರುವ ಕಾರ್ಯಪದ್ಧತಿಯು ಅಥವಾಅನುಷ್ಠಾನವು ಉದ್ದೇಶಹಾಗೂ ಧ್ಯೇಯಸಾಧನೆಗೆಎಷ್ಟು ಸಹಕಾರಿಯಾಗಿದೆಎಂಬಿತ್ಯಾದಿ ವಿಷಯಗಳಬಗೆಗೆ ಸ್ಪಷ್ಟತೆಇರಬೇಕು.

ಉದ್ದೇಶ(ಪ್ರತಿಫಲ)ವುನಮ್ಮ ವೈಯಕ್ತಿಕ, ಪಾರಿವಾರಿಕ ಅಥವಾಸಾಮಾಜಿಕವಾಗಿರುತ್ತದೆ ಹಾಗೂಸೀಮಿತ ಸಮಯದಲ್ಲಿಈಡೇರುತ್ತದೆ, ಆದರೆಧ್ಯೇಯವು ಸೀಮಿವಾಗಿರುವುದಿಲ್ಲ ಹಾಗೂ ಅದಕ್ಕೆಸಮಯದ ಮಿತಿಯುಇರುವುದಿಲ್ಲ. ಇನ್ನೊಂದುರೀತಿಯಲ್ಲಿ ಹೇಳುವುದಾದರೆಉದ್ದೇಶ ಅಥವಾಫಲವು ವ್ಯಷ್ಟಿಯಾಗಿದ್ದು ಹಾಗೂ ಧ್ಯೇಯವುಸಮಷ್ಟಿಯಾದದ್ದು. ವ್ಯಷ್ಟಿಮತ್ತು ಸಮಷ್ಟಿಗಳುಪರಸ್ಪರ ಪೂರಕವೇಆಗಿರಬೇಕಾಗುತ್ತದೆ.

ಉದಾಹರಣೆಗೆ, ಕಂಪ್ಯೂಟರ್‌ ಗೆಸಂಬಂಧಿಸಿದ ಉಪಕರಣವೊಂದನ್ನು ತಯಾರಿಸಿ, ಅದರಪೇಟೆಂಟ್‌ ಪಡೆಯಬೇಕುಎಂದು ಪ್ರಯತ್ನಿಸುತ್ತಿರುವ ಯುವಕನೊಬ್ಬ ತನ್ನಕಾರ್ಯಕ್ಕೆ ಯಾವಪ್ರತಿಫಲವನ್ನು ಬಯಸುತ್ತಾನೆ?

ತನ್ನ ಉಪಕರಣಸ್ವೀಕೃತವಾಗಬೇಕು, ಪೇಟೆಂಟ್‌ ಸಿಗಬೇಕು ಹಾಗೂತನ್ಮೂಲಕ ಹಣ, ಕೀರ್ತಿ, ಇದಕ್ಕಿಂತದೊಡ್ಡ ಮಟ್ಟದಪ್ರೊಜೆಕ್ಟ್‌ ಗಳನ್ನುಮಾಡಲು ಸಹಕಾರಇತ್ಯಾದಿಗಳು ದೊರೆಯಬೇಕುಎಂಬುದು ಉದ್ದೇಶವಾಗಿರುತ್ತದೆ. ಉಪಕರಣದವ್ಯಾಪಾರದಿಂದ ಹಣಬಂದರೆ, ಅದರಿಂದಮನೆ ಖರೀದಿಸಬೇಕು, ತಂದೆ-ತಾಯಿಯರಿಗೆಸೌಕರ್ಯ ಒದಗಿಸಬೇಕು, ಮಕ್ಕಳನ್ನು ಚೆನ್ನಾಗಿನೋಡಿಬೇಕು ಇತ್ಯಾದಿಕೌಟುಂಬಿಕ, ಸಾಮಾಜಿಕ, ವೃತ್ತಿಪರ ಪ್ರತಿಫಲಗಳನ್ನು ಅ ಒಂದುಪೇಟೆಂಟ್‌ ಮೂಲಕಹೊಂದಬಹುದು.

ಆದರೆ, ಕಂಪ್ಯೂಟರ್‌ ಉಪಕರಣಗಳ ನಿರ್ಮಾಣಕ್ಷೇತ್ರದಲ್ಲಿಇರುವ ವಿದೇಶೀಆಧಿಪತ್ಯ ಹಾಗೂಪ್ರತಿಯೊಂದು ಉಪಕರಣವನ್ನೂವಿದೇಶಗಳಿಂದ ಅಮದುಮಾಡಬೇಕಾದ ಅನಿವಾರ್ಯತೆಯಿಂದಾಗಿ, ವಿನಿಮಯಸುಂಕ, ವಿದೇಶೀಕಂಪನಿಗಳ ಹೆಚ್ಚುಬೆಲೆ ತೆರಬೇಕಾಗುತ್ತದೆ. ಸದರಿ ಪೇಟೆಂಟ್‌ ಸಂಪಾದನೆಯಿಂದಾಗಿ ಈಸಮಸ್ಯೆಗಳನ್ನು ಕಡಿಮೆಯಾಗಿ, ನಮ್ಮ ದೇಶದಲ್ಲಿತಯಾರಾದ ವಸ್ತುಗಳನ್ನೇನಾವುಗಳು ಉಪಯೋಗಿಸುವುದರಿಂದ ದೇಶದ ಸ್ವಾವಲಂಬನೆಗೆಅದು ಸಹಕಾರಿಯಾಗುತ್ತದೆ. ಈ ರೀತಿಒಬ್ಬ ಭಾರತೀಯನಿಗೆಹಾರ್ಡ್‌ವೇರ್‌ ಕ್ಷೇತ್ರದಲ್ಲಿ ಪೇಟೆಂಟ್‌ ಸಿಕ್ಕ ಘಟನೆಯುಇನ್ನಷ್ಟು ಜನರಿಗೆಪ್ರೇರಣೆಯಾಗಿ, ಅದೊಂದುಕ್ರಾಂತಿಕಾರಿ ಬದಲಾವಣೆಯಾಗಿ, ಅದಕ್ಕೆ ಸರ್ಕಾರವುಅನುಕೂಲಕರವಾದ ಕಾನೂನುನಿರ್ಮಾಣ, ಸಂಪನ್ಮೂಲಒದಗಿಸುವಿಕೆ ಇತ್ಯಾದಿಕೆಲಸ ಮಾಡಿದಾಗಒಂದೆರಡು ದಶಕಗಳಲ್ಲಿವಿಶ್ವಕ್ಕೆ ಉಪಕರಣಗಳನ್ನುಪೂರೈಸುವ ಮಟ್ಟಕ್ಕೆಭಾರತದ ಹಾರ್ಡ್‌ ವೇರ್‌ ಕ್ಷೇತ್ರವುಬೆಳೆದು ನಿಲ್ಲಬಹುದು. ಹೀಗೆ ದೂರದೃಷ್ಟಿಯಿಂದ ಅನೇಕ ಜನರುಅನೇಕ ರೀತಿಯಲ್ಲಿಪ್ರಯತ್ನಿಸಿದಾಗ ಈರೀತಿಯಾದ ಜಾಗತಿಕಮಟ್ಟದ ಬದಲಾವಣೆಸಾಧ್ಯವಾಗುತ್ತದೆ. ಇದುಧ್ಯೇಯವಾಗಿ ಇಟ್ಟುಕೊಳ್ಳಬಹುದಾದ ಸ್ಥಿತಿ.

ಒಂದು ಚಿಕ್ಕಉಪಕರಣದ ಪೇಟೆಂಟ್‌ ಗಾಗಿ ಪ್ರಯತ್ನಿಸುವವ್ಯಕ್ತಿಗೆ, ತನ್ನವೈಯಕ್ತಿಕ ಪ್ರತಿಫಲವನ್ನುಹೊಂದುವ ಉದ್ದೇಶದಜೊತೆಗೆ, ಈರೀತಿಯಾದ ದೀರ್ಘಕಾಲೀನಹಾಗೂ ರಾಷ್ಟ್ರೀಯಅಥವಾ ಜಾಗತಿಕಮಟ್ಟದ “ಧ್ಯೇಯ”ವುಇರಬೇಕಾಗುತ್ತದೆ. ಧ್ಯೇಯವು ಇರುವುದರಜೊತೆಗೆ, ತನ್ನಪ್ರತಿಫಲವೇನು?, ತನ್ನಧ್ಯೇಯಕ್ಕೆ ಅದುಎಷ್ಟು ಸಹಕಾರಿ? ಪ್ರತಿಫಲ ಹಾಗೂಧ್ಯೇಯಗಳ ನಡುವೆವೈರುಧ್ಯ ಉಂಟಾದಾಗಯಾವುದಕ್ಕೆ ಹೆಚ್ಚಿನಮಹತ್ವ ನೀಡಬೇಕು? ಎಂಬಿತ್ಯಾದಿ ಸ್ಪಷ್ಟತೆಯುವೈಚಾರಿಕ ಸಂಪನ್ಮೂಲವಾಗಿದೆ.

ಇನ್ನು ಗುರುಕುಲಗಳಲ್ಲಿ ಪ್ರಾಚೀನ ಶಾಸ್ತ್ರಗಳಅಧ್ಯಯನವು ಇದ್ದಾಗಿಯೂಕೂಡ, ಕೇವಲಶಾಸ್ತ್ರಗಳ ಸಂರಕ್ಷಣೆಯದೃಷ್ಟಿ ಅಥವಾಗತಕಾಲದ ವೈಭವದಮೆಲುಕು ಹಾಕುವಿಕೆಯದೃಷ್ಟಿಯಿಂದ ಮಾತ್ರವಲ್ಲದೇ, ಆ ಶಾಸ್ತ್ರಗಳಉಪಯೋಗ ಭವಿಷ್ಯತ್ತಿನಲ್ಲೆ ಹೇಗೆ ಸಾಧ್ಯ? ಎನ್ನುವ ದೃಷ್ಟಿಯನ್ನುಹೊಂದಿರಬೇಕಾಗುತ್ತದೆ. ಯಾವುದುಬಳಕೆಗೆ ಬರುವುದಿಲ್ಲವೋಅದು ಎಷ್ಟುಪ್ರಾಚೀನವಾದರೂ ಅದುಕೇವಲ ಐತಿಹಾಸಿಕಮಹತ್ವವನ್ನು ಹೊಂದಿರುತ್ತದೆ. ಹಾಗಾಗಿ ಗತಕಾಲದದೃಷ್ಟಿಯನ್ನು ಮಾತ್ರಹೊಂದಿರದೇ ಭವಿಷ್ಯೋನ್ಮುಖೀ ದೃಷ್ಟಿಯನ್ನು ಅಥವಾಸ್ಪಷ್ಟತೆಯನ್ನು ಹೊಂದಿರಬೇಕಾಗುತ್ತದೆ.

ಈ ರೀತಿಯಾಗಿವಿಷಯ, ವಸ್ತುಮತ್ತು ವಿಚಾರಎಂಬ ಮೂರೂಪ್ರಕಾರದ ಸಂಪನ್ಮೂಲಗಳುಅಭಿನವ ಗುರುಕುಲಗಳಸ್ಥಾಪನೆಗೆ ಅಗತ್ಯವಾಗಿರುತ್ತವೆ.